ದಾವಣಗೆರೆ ನಗರಸಭೆಯು 1939ರಿಂದ ಅಸ್ತಿತ್ವದಲ್ಲಿದ್ದು, ಜನವರಿ 6, 2007 ರಂದು ಮಹಾನಗರಪಾಲಿಕೆಯಾಗಿ ಉನ್ನತೀಕರಣಗೊಂಡಿರುತ್ತದೆ. ಪ್ರಸ್ತುತ ನಗರವು 45 ವಾರ್ಡುಗಳನ್ನು ಹೊಂದಿದ್ದು, ಮಹಾನಗರಪಾಲಿಕೆ ಸದಸ್ಯರು ನಗರದ ನಾಗರೀಕರಿಂದ ಚುನಾಯಿತರಾಗುತ್ತಾರೆ. ನಗರದ ವಿಸ್ತೀರ್ಣ 72.12 ಚ.ಕಿ.ಮೀ.ಗಳಾಗಿದ್ದು, ಜನಸಂಖ್ಯೆ 2011ರ ಜನಗಣತಿ ಪ್ರಕಾರ 4,34,971 ಇರುತ್ತದೆ. ದಾವಣಗೆರೆ ಮಹಾನಗರಪಾಲಿಕೆ ಮುಖ್ಯ ಕಛೇರಿಯು ಪಿ ಬಿ ರಸ್ತೆಯಲ್ಲಿ ರೈಲ್ವೆ ನಿಲ್ದಾಣದ ಎದುರು ಇದ್ದು, ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.