ಜನನ ಅಥವಾ ಮರಣ ಘಟನೆಗಳು ಸಂಭವಿಸಿದ 21 ದಿನಗಳೊಳಗಾಗಿ ಸಂಬಂಧಪಟ್ಟ ಕಛೇರಿಗೆ ಹೋಗಿ ನೊಂದಾಯಿಸಬೇಕಾಗಿರುತ್ತದೆ. ದಾವಣಗೆರೆ ನಗರದ ಚಿಗಟೇರಿ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹೊರತು ಪಡಿಸಿ, ಉಳಿದ ಎಲ್ಲಾ 42 ಖಾಸಗಿ ಆಸ್ಪತ್ರೆಗಳಿಂದ ಜನನ ಅಥವಾ ಮರಣ ಸಂಭವಿಸಿದ ಘಟನೆಗಳನ್ನು ಮಹಾನಗರಪಾಲಿಕೆ ಕಛೇರಿಗೆ ಸಲ್ಲಿಸುತ್ತಿದ್ದು, ನಂತರ ಮಹಾನಗರಪಾಲಿಕೆಯಲ್ಲಿ ಆನ್ ಲೈನ್ ಮೂಲಕ ಡಾಟಾ ಎಂಟ್ರಿ ಮಾಡಿಸಿ, ಡಿಜಿಟಲ್ ಸಹಿಯೊಂದಿಗೆ ವಿತರಣೆ ಮಾಲಾಗುತ್ತಿದೆ. ಹಾಗೂ ಅರ್ಜಿದಾರರು ಕೊಟ್ಟ ಅರ್ಜಿಯನ್ನು ಸಕಾಲದಲ್ಲಿ ಎಂಟ್ರಿ ಮಾಡಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.ನೊಂದಣಿಯಾಗದ ಜನನ ಅಥವಾ ಮರಣದ ವರದಿಗಳಿಗೆ ಅಲಭ್ಯ ಪ್ರಮಾಣ ಪತ್ರ (ನಮೂನೆ-10) ನೀಡಿ ನ್ಯಾಯಾಲಯದ ಆದೇಶಕ್ಕೆ ಕಳುಹಿಸಲಾಗುತ್ತಿದೆ.
ನಮೂನೆಗಳ ವಿವರ ಈ ಕೆಳಗಿನಂತೆ ಇರುತ್ತದೆ. 
ನಮೂನೆ-1 – ಜನನ ವರದಿ 
ನಮೂನೆ-2 – ಮರಣ ವರದಿ 
ನಮೂನೆ-3 – ನಿರ್ಜಿವ ಜನನ ವರದಿ
ನಮೂನೆ-10 – ಅಲಭ್ಯ ಪ್ರಮಾಣ ವರದಿ

 

 

 

ಮೂಲ : ದಾವಣಗೆರೆ ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ.